What Happens After Death | ಸಾವಿನಾಚೆಗೇನಿದೆ? ಸತ್ತು ಬದುಕಿ ಬಂದವರು ಹೇಳಿದ ಭಯಾನಕ ಸಂಗತಿಗಳು | MVVOT

What Happens After Death

What Happens After Death
What Happens After Death

ಸ್ನೇಹಿತರೆ MVVOT ಯ ಮತ್ತೊಂದು ಸಂಚಿಕೆಗೆ ನಿಮಗೆಲ್ಲ ಪ್ರೀತಿಯ ಸ್ವಾಗತ ಹುಟ್ಟು ಉಚಿತ ಸಾವು ಕಚಿತ ಎಂಬ ಮಾತಿದೆ ಸಾವು ಅನ್ನೋದು ನಮಗೀವರೆಗೂ ಅರ್ಥವಾಗದ ಗೊಂದಲವಾಗಿಯೇ ಉಳಿದಿದೆ, ಇವತ್ತು ಸಾವಿನ ಬಗ್ಗೆ ಎಷ್ಟೇ ಸಂಶೋಧನೆ ಪ್ರಯೋಗ ನಡೆಯುತ್ತಾ ಇದ್ದರು ಬಹುಶಃ ಅದು ಮನುಕುಲಕ್ಕೆಂದು ಸಹ ನಿಲುಕದ ತರ್ಕವಾಗಿಯೇ ಉಳಿಯುತ್ತದೇನು ಸಾವಿನ ಬಗ್ಗೆ ಪೂರ್ತಿ ತಿಳಿದವರು ಯಾರು ಯಾರ ಇಲ್ಲ ಆದರೂ ಸಹ ಯಾರು ಕೂಡ ಅದರಿಂದ ತಪ್ಪಿಸಿಕೊಳ್ಳುವುದಕ್ಕೆ ಸಾಧ್ಯವಿಲ್ಲ.

ಬದುಕಿನಾಚೆಗೆ ಏನಿದೆ ಸಾವಿನಾಚೆಗೆ ಏನಿದೆ ಅನ್ನೋದು ಯಾರಿಗೂ ನಿಖರವಾಗಿ ಗೊತ್ತಿಲ್ಲ ಸಾವಿನಾಚೆಗೆ ನರಕ ಇದೆ ಸ್ವರ್ಗ ಇದೆ ಏನೇನೋ ಇದೆ ಎಂಬ ನಂಬಿಕೆಗಳು ಜಗತ್ತಿನ ಎಲ್ಲಡೆಯೂ ಇವೆ ಆಯಾ ಕಾಲಘಟ್ಟದಲ್ಲಿ ಆಯಾ ಕಾಲದೇಶಗಳಿಗೆ ಸೂಕ್ತವಾದ ಸಾವಿನ ಕುರಿತಾದ ಇಂತಹ ಎಷ್ಟೋ ನಂಬಿಕೆಗಳು ತತ್ವಗಳು ಬೆಳೆದಿದೆ.

ಅವರವರಿಗೆ ಅವರವರ ನಂಬಿಕೆಯೇ ಸತ್ಯ ಸತ್ತ ವ್ಯಕ್ತಿ ಬದುಕಿ ಬರ ರೋದಿಲ್ಲ ಸಾವೆ ಅಂತಿಮ ಅದೇ ಮನುಷ್ಯನ ಅಥವಾ ಇತರೇ ಜೀವಿಗಳ ನಿತ್ಯತೆ ಎಡೆಗಿನ ಕೊನೆಯ ಪಯಣ ಎನ್ನುತ್ತಾರೆ. ಆದರೆ ಎಷ್ಟೋ ನಂಬಲ ಸಾಧ್ಯವಾದ ಪ್ರಕರಣಗಳಲ್ಲಿ ಇದಕ್ಕೆ ವ್ಯತಿರಿಕ್ತವಾದ ಸಂಗತಿಗಳು ನಡೆದಿದೆ ಸತ್ತ ನಂತರವೂ ಎಷ್ಟೋ ಹೊತ್ತಿನ ನಂತರ ಹಲವಾರು ಜನ ಬದುಕಿ ಬಂದ ಉದಾಹರಣೆಗಳಿವೆ ಇಂತಹ ಸುದ್ದಿಗಳನ್ನ ನಾವು ಸಹ ದಿನನಿತ್ಯ ಅಲ್ಲಿ ಇಲ್ಲಿ ಕೇಳುತ್ತಲೇ ಇರ್ತೀವಿ ಆದರೆ ಇದಕ್ಕಿಂತ ವಿಚಿತ್ರವೇನೆಂದರೆ ಹಾಗೆ ಬಹಳ ಹೊತ್ತಿನ ನಂತರ ಬದುಕಿ ಬಂದವರು ತಿಳಿಸಿದ ಅಥವಾ ಹೇಳಿದ ಚಿತ್ರ ವಿಚಿತ್ರ ಹೇಳಿಕೆಗಳು, ಈ ರೀತಿ ಹೇಳಿದವರ ಮಾತುಗಳು ಸಾವಿನಾಚೆಗೆ ಏನಿರಬಹುದೆಂಬುದರ ಚಿತ್ರಣ ಅಥವಾ ಕಲ್ಪನೆಯನ್ನ ನಿಗೂಢವಾಗಿ ತಿಳಿಸುವಲ್ಲಿ ಸಹಾಯ ಮಾಡಿವೆಯೇ ಅನ್ನುವುದು ಗಂಭೀರವಾದ ಪ್ರಶ್ನೆ. ಇವತ್ತಿನ ಈ ಸಂಚಿಕೆಯಲ್ಲಿ ಅಂತಹ ಕೆಲ ವಿಚಿತ್ರ ಪ್ರಸಂಗಗಳ ಕುರಿತಾಗಿ ಆಸಕ್ತಿಕರವಾಗಿ ತಿಳಿಯಲು ಪ್ರಯತ್ನಿಸೋಣ ಬನ್ನಿ. 

ಘಟನೆ 1 :- 1915ರಲ್ಲಿ ಅಮೆರಿಕಾದ ಸೌತ್ ಕೆರೋಲಿನಾದಲ್ಲಿ ಒಂದು ವಿಚಿತ್ರ ಘಟನೆ

1915ರಲ್ಲಿ ಅಮೆರಿಕಾದ ಸೌತ್ ಕೆರೋಲಿನಾದಲ್ಲಿ ಒಂದು ವಿಚಿತ್ರ ಘಟನೆ ಸಂಭವಿಸಿತ್ತು ಎಸ್ಎ ಡಾನ್ ಬಾರ್ ಎಂಬ 30ರ ಆಸುಪಾಸಿನ ಮಹಿಳೆಯೊಬ್ಬರು ಅಲ್ಲಿಯ ವೈದ್ಯರಿಂದ ಡೆಡ್ ಎಂದು ಡಿಕ್ಲೇರ್ ಆಗಿದ್ದರು ಇವರು ಸತ್ತು ಹೋಗಿದ್ದಾರೆಂದೆ ನಂಬಿ ಕ್ರಿಶ್ಚಿಯನ್ ಸಂಪ್ರದಾಯದಂತೆ ಅವರನ್ನ ಕೋಫಿನ್ ಒಳಗಿಟ್ಟು ಮುಚ್ಚಲಾಯಿತು. ಹಾಗೆ ಮುಚ್ಚಿದ ಹಲವು ನಿಮಿಷಗಳ ನಂತರ ಈಕೆಯನ್ನ ಕೊನೆಯ ಸಲ ನೋಡಲೆಂದು ದೂರದ ಇಟಲಿಯಿಂದ ಈಕೆಗಿದ್ದ ಒಬ್ಬಳೆ ಸೋದರಿ ಬಂದಿದ್ದರು ಅವರು ಬರುವಷ್ಟರೊಳಗೆ ಇಲ್ಲಿ ಡನ್ ಬಾರ್ನ ದೇಹವನ್ನ ಕಾಫಿನ್ನ ಒಳಗಿಟ್ಟು ಎಲ್ಲಾ ವಿಧಿ ವಿಧಾನ ಮುಗಿಸಿ ಹೂಳಲಾಗಿತ್ತು. 

ನಾನು ಕೊನೆ ಸಲ ಒಂದೇ ಒಂದು ಬಾರಿ ಅವಳ ಮುಖದರ್ಶನ ಮಾಡ್ತೀನಿ ದಯಮಾಡಿ ಅದನ್ನ ತೆರೆದು ಒಮ್ಮೆ ಅವಳ ಮುಖ ತೋರಿಸಿ ಸಾಕಷ್ಟು ದೂರದಿಂದ ಬಂದಿರುವೆ ನೋಡದೆಯೇ ಹೋಗಲು ನನ್ನ ಮನಸ್ಸು ಒಪ್ಪೋದಿಲ್ಲ ಎಂದು ಆಕೆ ಪರಿಯಾಗಿ ವಿನಂತಿಸಿದಳು, ಆದರೆ ಒಂದು ಸಲ ಮುಚ್ಚಿದ ಶವ ಪೆಟ್ಟಿಗೆಯನ್ನ ಹಾಗೆಲ್ಲ ಯಾವುದೇ ಕಾರಣಕ್ಕೂ ಸಹ ಹೊರ ತೆಗೆಯುದು ಪದ್ಧತಿಯಲ್ಲ ಆದರೂ ಸಹ ಆಕೆ ಅಷ್ಟು ರಿಕ್ವೆಸ್ಟ್ ಮಾಡಿದ್ದರಿಂದ ಆಕೆಯ ಅಹವಾಲಿಗೆ ಒಪ್ಪಿದ ಅವರು ಕ್ಷವಪೆಟ್ಟಿಗೆ ಹೊರತೆಗೆದಾಗ ಅದರೊಳಗಿದ್ದ ಎಸ್ಸೆ ಎಲ್ಲರೂ ದಿಗ್ಭ್ರಮೆ ಪಡುವ ರೀತಿಯಲ್ಲಿ ಎದ್ದು ಕುಳಿತೆ ಬಿಟ್ಳು.

ಇದನ್ನ ನೋಡಿದ ಎಲ್ಲರೂ ಕಕ್ಕಾಬಿಕ್ಕಿಯಾದರು ಇದರ ನಂತರ ಆ ಮಹಿಳೆ ಮುಂದಿನ 47 ವರ್ಷಗಳವರೆಗೂ ಸಹ ಜೀವಿಸಿ ಕೊನೆಗೆ 1955ರಲ್ಲಿ ಮೃತರಾದರು. ಹಾಗಾದರೆ ಇಲ್ಲಿ ಆಕೆಯನ್ನ ಯಾವ ಮಾನದಂಡಗಳ ಮೇಲೆ ವೈದ್ಯರು ಸತ್ತು ಹೋಗಿದ್ದಾರೆಂದು ಹೇಳಿದ್ದರು ಅಷ್ಟು ಹೊತ್ತು ಆಕೆ ಯಾಕಾಗಿ ಉಸಿರಾಡದೆ ಮಲಗಿದ್ದಳು ಈ ಅವಧಿಯಲ್ಲಿ ಆಕೆಯ ಸುಪ್ತ ಮನಸ್ಸು ಎಲ್ಲೆಲ್ಲಿ ತಿರುಗಾಡುತಿತ್ತು ಹಾಗೂ ಅದು ಏನೇನನ್ನ ನೋಡಿ ಬಂತು ಅನ್ನೋದು ಇಂದಿಗೂ ನಿಗೂಡ ಈ ಬಗ್ಗೆ ಆಕೆಯನ್ನೇ ಕೇಳಿದಾಗ ನನಗೇನು ಗೊತ್ತಿಲ್ಲ ಮೂರ್ಚೆ ಹೋಗಿ ಮಲಗಿದ್ದೆ ಅಷ್ಟೇ ನನಗೆ ನಾನು ಆ ಸಮಯದಲ್ಲಿ ಎಲ್ಲಿದ್ದೆ ಹೇಗಿದ್ದೆ ಅನ್ನೋದರ ನೆನಪು ಸಹ ನನಗಿಲ್ಲ ಎಂದಿದ್ದರು.

ಘಟನೆ 2 :- ಬಯಲು ಸೀಮೆಯ ಮಳಕಾಲ್ಮೂರು ತಾಲೂಕಿನ ಹಳ್ಳಿಯೊಂದರಲ್ಲಿ

ಇದನ್ನು ಓದಿ :

ಇನ್ನೊಂದು ಘಟನೆ ಬಯಲು ಸೀಮೆಯ ಮಳಕಾಲ್ಮೂರು ತಾಲೂಕಿನ ಹಳ್ಳಿಯೊಂದರಲ್ಲಿ ನಡೆದಿದೆ ಎನ್ನಲಾಗುತಿದೆ ಅದರ ಪ್ರಕಾರ ಅಲ್ಲಿಯ ಹಳ್ಳಿಯೊಂದರ ನಿವಾಸಿಯಾದ ಮುಸ್ಲಿಂ ಸಮುದಾಯದ ಕಾಜಮ್ಮ ಎಂಬಾಕಿಗೆ ಆಗ 60 ಪ್ಲಸ್ ವಯಸ್ಸಾಗಿತ್ತು ಆದರೆ ಈಕೆ 35 ವರ್ಷಗಳ ಹಿಂದೆ ಅಂದ್ರೆ ಈಕೆಯ ಮದುವೆಯಾದ ಹೊಸದರಲ್ಲಿ ಕೆಲವು ನಿಮಿಷಗಳ ಕಾಲ ಅಕ್ಷರಶಹ ಸತ್ತೆ ಹೋಗಿದ್ದಳು. 

ಆಗ ಯಾರು ನಂಬದ ಸ್ಥಿತಿಯಲ್ಲಿ ಎದ್ದು ಬಂದಿದ್ದ ಕಾಜಮ್ಮ ಹೇಳಿದ ಸಂಗತಿ ತುಂಬಾ ವಿಚಿತ್ರವಾಗಿತ್ತು. ಆಕೆ ಪ್ರಕಾರ ಆಕೆಯನ್ನ ಇಬ್ಬರು ಯಮಕಿಂಕರರು ಎಳೆದುಕೊಂಡು ಹೋದರು ಅಲ್ಲೊಂದು ಕಡೆ ಯಾರೋ ಒಬ್ಬ ವ್ಯಕ್ತಿ ಈಕೆಯನ್ನ ನೋಡಿ ನಿನಗಿನ್ನು ಆಯಸ್ಸು ಮುಗಿದಿಲ್ಲ, ಹೀಗಾಗಿ ಈಕೆಯನ್ನ ಕಳಿಸಿಕೊಡಿ ಅಂತ ಹೇಳಿದ್ರಂತೆ, ಹೋಗುವಾಗ ಆಕೆಗೆ ಒಂದು ಸಣ್ಣ ಸಸಿಯೊಂದನ್ನ ಕೊಟ್ಟು ಇದನ್ನ ಮನೆ ಹತ್ತಿರ ನೆಡು ಅಂತಲೂ ಸಹ ಹೇಳಿದ್ರಂತೆ ಇವತ್ತು ಅದೇ ಏರಿಯಾದಲ್ಲಿ ಸಣ್ಣ ಗೂಡಂಗಡಿಯಂತಹ ಪೆಟ್ಟಿಗೆ ಅಂಗಡಿ ಇಟ್ಟಿರುವ ಆಕೆಯ ಅಂಗಡಿಯ ಮುಂದೆ ಒಂದು ಉದ್ದನೆಯ ದಾಳಿಂಬೆ ಗಿಡವಿದೆ ಇದೇ ಸಸಿ ಅವತ್ತು ನಾನು ತಂದು ಇಲ್ಲಿ ಹಾಕಿದ್ದು ಅಂತಾರೆ, ಇದರ ಬಗ್ಗೆ ಅಲ್ಲಿರುವವರನ್ನ ಕೇಳಿದಾಗ ಅದೇನೋ ಗೊತ್ತಿಲ್ಲ ಅವತ್ತು ಆಕೆ ಕೆಲವು ಕ್ಷಣಗಳ ಕಾಲ ನಿಷ್ತೇಜಳಾಗಿ ಮಲಗಿದ್ದಂತು ಸತ್ಯ ನಾವೆಲ್ಲ ಆಕೆ ಸತ್ತೆ ಹೋದಲು ಅಂದುಕೊಂಡಿದ್ವಿ ಆಕೆ ಎದ್ದ ನಂತರ ನಮಗೆಲ್ಲ ಗಾಬರಿಯಾಗಿತ್ತು ಕೆಲವು ದಿನಗಳ ನಂತರ ಗಿಡವನ್ನ ಅವಳೇ ಅಲ್ಲಿ ನೆಟ್ಟಿದ್ದಳು ನಾವು ನೋಡಿದ ನೆನಪಿದೆ ಎಂದು ಆಕೆಯ ಜಮಾನದ ಕೆಲವರು ಹೇಳುತ್ತಾರೆ. 

ಹಾಗಾದರೆ ಕಾಜಮ್ಮ ಹೇಳೋದು ನಿಜವೇ ಇರಬಹುದೇ ಇಲ್ಲಿ ಇನ್ನೊಂದು ಮುಖ್ಯ ಸಂಗತಿ ಗಮನಿಸಬೇಕು ತಾನು ನೋಡಿದ್ದು ಯಮ ಮತ್ತು ಆತನ ಕಿಂಕ ಎನ್ನುವ ಈ ಮಹಿಳೆ ಮೂಲತಹ ಮುಸಲ್ಮಾನ್ ಸಮುದಾಯದವರು ಸಾವಿನ ನಂತರ ಏನಿದೆ ಅನ್ನೋದರ ಬಗ್ಗೆ ಅವರ ಕಲ್ಪನೆಯೇ ಬೇರೆ ನಮ್ಮದೇ ಕಲ್ಪನೆ ಬೇರೆ ಆಗಿದ್ದು ಸಹ ಆಕೆ ಈ ರೀತಿ ಹೇಳಲು ಏನು ಕಾರಣ ಅನ್ನೋದು ಸಾವಿನಷ್ಟೇ ನಿಗೂಡ. 

ಘಟನೆ 3 :- ಅಮೆರಿಕಾದ ನ್ಯೂಜರ್ ಒಬ್ಬ ಟೀನೇಜ್ ಯುವಕ ಜೀವನದಲ್ಲಿ

Read More Blogs….. Click here

ಅಮೆರಿಕಾದ ನ್ಯೂಜರ್ ಒಬ್ಬ ಟೀನೇಜ್ ಯುವಕ ಜೀವನದಲ್ಲಿ ಜಿಗುಪ್ಸೆ ಬಂದು ಎರಡು ಸಲ ಆತ್ಮಹತ್ಯೆಗೆ ಪ್ರಯತ್ನಿಸಿದ್ದ ಎರಡನೇ ಸಲ ನಿದ್ರೆ ಮಾತ್ರೆಯ ಓವರ್ಡೋಸ್ ನಿಂದ ಆಲ್ಮೋಸ್ಟ್ ಕೆಲವು ಸೆಕೆಂಡ್ಗಳ ಕಾಲ ಅವನ ಹೃದಯ ಬಡಿತವೇ ನಿಂತು ಹೋಗಿತ್ತು. ಈ ಸಮಯದಲ್ಲಿ ಅವನು ಸತ್ತು ಹೋಗಿದ್ದಾನೆಂದೆ ಎಲ್ಲರೂ ನಂಬಿದ್ದರು, ಆದರೆ ಕೆಲವು ಸೆಕೆಂಡ್ಗಳ ನಂತರ ಹೆಚ್ಚೆತ್ತ ಅವನು ಹೇಳಿದ ಮಾತುಗಳು ಎಲ್ಲರನ್ನ ಚಕಿತಗೊಳಿಸಿದ್ದವು. 

ನಾನು ಆ ಅವಧಿಯಲ್ಲಿ ಒಂದು ಸಂಪೂರ್ಣ ಬಿಳಿ ಲೋಕದಲ್ಲಿದ್ದಂತೆ ನನಗೆ ಬಾಸವಾಯಿತು ಅದು ನಿರ್ಜನವಾಗಿತ್ತು ಹಾಗೂ ತುಂಬಾ ಪ್ರಶಾಂತತೆಯಿಂದ ಕೂಡಿತ್ತು ಸುತ್ತ ಎಲ್ಲಿ ನೋಡಿದ್ರು ಪ್ರಶಾಂತಮಯವಾದ ಬಿಳಿಬಣ್ಣದ ಪ್ರಕಾಶ ಬೆಳಕು ಅಲ್ಲಿ ಆವರಿಸಿತ್ತು ನಾನು ಅಲ್ಲಿದ್ದಷ್ಟು ಹೊತ್ತು ತುಂಬಾ ನೆಮ್ಮದಿಯ ನಿದ್ರೆಯಲ್ಲಿದ್ದೆ ಅಂತಹ ನೆಮ್ಮದಿದಾಯಕ ನಿದ್ರೆಯ ನ್ನ ನಾನು ಯಾವತ್ತೂ ಸಹ ಮಾಡೆ ಇಲ್ಲ ಅನಿಸಿತು ಬಹುಶಃ ಇದೇ ಸಾವಾಗಿದ್ರೆ ನನಗೆ ಇಂತಹ ನೋವಿಲ್ಲದ ನೆಮ್ಮದಿಯ ಅನುಭವ ತರುವ ಸಾವೇ ಸಿಗಲಿ ಎಂದು ನಾನು ಆಶಿಸುತ್ತೀನಿ. 

ಬದುಕಿನ ಒತ್ತಡಕ್ಕಿಂತ ಈ ರೀತಿಯ ನೆಮ್ಮದಿದಾಯಕ ಸಾವೆಷ್ಟೋ ಉತ್ತಮ ನಾನು ಸಾವಿಗಾಗಿ ಹಂಬಲಿಸಿದವನು ಅದಕ್ಕಾಗಿಯೇ ಎರಡು ಸಲ ಪ್ರಯತ್ನ ಕೂಡ ಪಟ್ಟೆ ಈ ಮೊದಲು ಸಾವು ಅಂದರೆ ಹೇಗಿರುತ್ತದೋ ಎಂಬ ಭಯ ಇತ್ತು ಈಗ ಅದರ ಅನುಭವ ಸಿಕ್ಕ ನಂತರ ಸಾವಿಗೆ ನಾನು ಯಾವತ್ತೂ ಸಹ ಹೆದುರೋದೇ ಇಲ್ಲ ಅದು ಈ ಕ್ಷಣ ಬಂದರು ನಾನು ಅದನ್ನ ಸ್ವೀಕರಿಸಲು ಸದಾ ಸಿದ್ಧ ಆ ಲೋಕಕ್ಕೆ ಮತ್ತೆ ಹೋಗುವ ಆಸೆ ಹೆಚ್ಚಾಗ್ತಾ ಇದೆ ಎಂದು ಆತ ಸುದೀರ್ಘವಾಗಿ ತನ್ನ ಅನಿಸಿಕೆ ಹಂಚಿಕೊಂಡಿದ್ದ ಬಹುಶಃ ಸಾವಿನ ಬಗ್ಗೆ ಕೇಳಿ ಬರಬಹುದಾದ ಅತ್ಯುತ್ತಮ ರಿವ್ಯೂ ಇದೆ ಅನ್ಸುತ್ತೆ ಇಂತಹ ಇನ್ನು ಕೆಲ ಉದಾಹರಣೆಗಳಲ್ಲಿ ಕೆಲ ಕ್ಷಣಗಳವರೆಗೂ ಸತ್ತು ಹೋದವರು ನಾವು ಸಂಪೂರ್ಣ ಕಪ್ಪನೆಯ ಸ್ಥಳಕ್ಕೆ ಹೋಗಿ ಬಂದ್ವಿ ಅಲ್ಲಿ ಎಲ್ಲಾ ಕಡೆ ಅಂಧಕಾರವು ತುಂಬಿದ್ದರು ಸಹ ಅದು ಅಷ್ಟೇನು ಭಯಾನಕ ಅನಿಸಲಿಲ್ಲ, ಪ್ರಶಾಂತವಾದ ತಣ್ಣನೆಯ ತಂಗಾಳಿ ಅಲ್ಲಿ ಬೀಸುತ್ತಾ ಇತ್ತು ಎಷ್ಟು ಎಷ್ಟು ಹೊತ್ತು ನಡೆದರು ಸಹ ಆಯಾಸ ಅನಿಸಲಿಲ್ಲ ಅಲ್ಲಿಯೇ ಇರೋಣ ಎಂಬ ತವಕ ಉಂಟಾಯಿತು ಎಂದು ಮುಂತಾಗಿ ಹೇಳಿದ್ದಾರೆ. 

ಈ ಬಿಳಿಲೋಕ ಹಾಗೂ ಕಪ್ಪು ಲೋಕಗಳು ಏನಿರಬಹುದು ಅದು ಯಾರ ನಿಯಂತ್ರಣದಲ್ಲಿದೆ ಅಲ್ಲಿ ಯಾರಿರಬಹುದು ಇವೆಲ್ಲ ಇವತ್ತಿಗೂ ಸಹ ಉತ್ತರವಿರದ ಪ್ರಶ್ನೆಗಳೇ ಆಗಿವೆ ಅನೇಕರು ಲಘು ಹೃದಯಾಘಾತಕ್ಕೊಳಗಾಗಿ ಕೆಲವು ಕ್ಷಣಗಳ ಕಾಲ ನಿಷ್ಟೇಜಿತರಾಗಿದ್ದು ಆಬಳಿಕ ಜೀವಂತವಾಗಿ ಎದ್ದುಬಂದ ಉದಾಹರಣೆಗಳು ಇದೆ ಇವರಲ್ಲಿ ಎಷ್ಟೋ ಜನ ಆ ಅವಧಿಯಲ್ಲಿ ನಾವು ಅವರ್ಣನೀಯ ನೆಮ್ಮದಿ ಹಾಗೂ ಶಾಂತ ಮನಸ್ಥಿತಿಯಲ್ಲಿ ಯಾವುದೋ ನಮಗರಿಯದ ಅಪರಿಚಿತ ಸ್ಥಳದಲ್ಲಿ ತೇಲುತ್ತಾ ಇದ್ವಿ ಎಂದಿದ್ದಾರೆ. ಸಾವು ಕೊನೆಯ ಸುಖನಿದ್ರೆ ಅಂತಾರೆ ಇಂತಹ ನೆಮ್ಮದಿಯ ನಿದ್ರೆ ಬದುಕಿದ್ದಾಗ ಸಿಗೋದಿಲ್ಲ ಆದರೆ ಕೆಲವು ಕ್ಷಣಗಳ ಮಟ್ಟಿಗಾದರೂ ಸಾವಿನ ರುಚಿ ಕಂಡುಬಂದವರ ಅನುಭವಗಳು ಹಲವು ಸಲ ಮೈ ಜುಮ್ಮೆನಿಸುತ್ತವೆ. 

ಈ ಸಾವಿನಾಚಯ ಲೋಕದಲ್ಲಿಏನಿದೆ ಎಂಬ ಕುತೂಹಲ ಮೂಡಿಸುತ್ತದೆ, ಸಾವಿನ ಈ ಅನುಭವವನ್ನ ವೈಜ್ಞಾನಿಕ ಭಾಷೆಯಲ್ಲಿ ಎನ್ಡಿಇ ಅಥವಾ ನಿಯರ್ ಡೆತ್ ಎಕ್ಸ್ಪೀರಿಯನ್ಸ್ ಎಂದು ಕರೆಯಲಾಗಿದೆ. 1972ರಲ್ಲಿ ರೈಮಂಡ್ ಮೂಡಿ ಎನ್ನುವ ನ್ಯೂರಾಲಜಿಯ ತಜ್ಞರು ಇದನ್ನ ಮೊಟ್ಟಮೊದಲ ಬಾರಿಗೆ ಪರಿಚಯಿಸಿ 150 ಜನ ನ್ಯೂರಾಲಜಿಯ ರೋಗಿಗಳ ಮೇಲೆ ಪ್ರಯೋಗ ನಡೆಸಿದ್ರು ಈ ಪ್ರಯೋಗದಲ್ಲಿ ಅನೇಕರು ನಾವು ಅನೇಕ ಸಲ ಇಂತಹ ಅನುಭವಕ್ಕೆ ಸಾಕ್ಷಿಯಾಗಿದ್ದೇವೆ ಎಂದಿದ್ರು. 

ಎಷ್ಟೋ ಜನ ನಮ್ಮ ಕೊನೆಗಾಲದಲ್ಲಿ ಏನೇನೋ ಅನುಭವಕ್ಕೊಳಗಾಗ್ತಾರೆ ಆ ಸಮಯದಲ್ಲಿ ಅವರಿಗೆ ಸುತ್ತ ಮುತ್ತ ಯಾರ್ಯಾರೋ ಕಾಣಿಸ್ತಾರೆ ಏನೇನೋ ವಿಚಿತ್ರ ಶಬ್ದಗಳು ಸಹ ಕೇಳಿಸುತ್ತವಂತೆ ಕೆಲವರಿಗೆ ರೆಕ್ಕೆಗಳಿರುವ ಹಾರಾಡುವ ಏಂಜೆಲ್ಗಳು ಫೇರಿಗಳು ಕಂಡರೆ ಇನ್ನು ಹಲವರಿಗೆ ಸತ್ತು ಹೋದ ಅವರ ಹಳೆಯ ಸಂಬಂಧಿಗಳು ಕಾಣುತಾರಂತೆ, ಕೆಲವರಿಗೆ ಟನಲ್ ಮಾದರಿಯ ಕೊಳವೆಯ ದಾರಿ ಕಾಣುತ್ತದಂತೆ ಒಟ್ಟಿನಲ್ಲಿ ಈ ಸಾವನ್ನೋವುದು ಯಾರಿಗೂ ಗೊತ್ತಾಗದ ಮಹಾ ಕೌತುಕ ಅನ್ನೋದಂತು ಸಾರ್ವಕಾಲಿಕ ಸತ್ಯ ಇಂತಹ ವಿಚಿತ್ರ ಅನುಭವಗಳ ಬಗ್ಗೆ ನೀವೆಲ್ಲಿಯಾದರೂ ಕೇಳಿದ್ದುಂಟೆ ಎಂಬುದರ ಬಗ್ಗೆ ಹಾಗೂ ವಿಡಿಯೋದ ಬಗ್ಗೆ ನಿಮ್ಮ ಅನಿಸಿಕೆಯನ್ನ ಕಾಮೆಂಟ್ ಬಾಕ್ಸ್ನಲ್ಲಿ ಬರೆಯಿರಿ ಮತ್ತೊಂದು ಸಂಚಿಕೆಯಲ್ಲಿ ಸಿಗೋಣ ಅಲ್ಲಿವರೆಗೂ ನಮಸ್ಕಾರ….

ಇಂತಹ ಇನ್ನಷ್ಟು ಸಂಚಿಕೆಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ.

Leave a Comment

Your email address will not be published. Required fields are marked *

Scroll to Top