How to convert Text – PDF Full guide In Kannada

ಇಂದಿನ ಈ ಡಿಜಿಟಲ್ ಯುಗದಲ್ಲಿ, PDF ( Portable Document Format ) ಫೈಲ್‌ಗಳು ದಾಖಲೆಗಳನ್ನು ಅಥವಾ ಮಾಹಿತಿಯನ್ನು ಹಂಚಿಕೊಳ್ಳುವ ಅಥವಾ ಶೆಕರಿಸಿ ಇಡುವ ಒಂದು ಅತ್ತ್ಯುತ್ತಮ ಮಾರ್ಗವಾಗಿ ಮಾರ್ಪಟ್ಟಿವದೆ. ಕನ್ನಡ, ಇಂಗ್ಲಿಷ್, ತೆಲುಗು, ತಮಿಳು, ಮಲಯಾಳಂ, ಉರ್ದು, ಅಥವಾ ಯಾವುದೇ ಭಾಷೆಯ ಟೆಕ್ಸ್ಟ್ ಫೈಲ್‌ಗಳನ್ನು (TXT, DOCX) PDF ( Portable Document Format ) ಆಗಿ ಪರಿವರ್ತಿಸುವುದು ವೃತ್ತಿಪರತೆ, ಸುರಕ್ಷತೆ ಮತ್ತು ಸುಲಭ ಹಂಚಿಕೆಗೆ ಅಗತ್ಯವಾಗಿದೆ. ಈ ಲೇಖನದಲ್ಲಿ, ಟೆಕ್ಸ್ಟ್‌ನಿಂದ PDF ರಚನೆ ಮಾಡುವ ವಿವಿಧ ವಿಧಾನಗಳು, ಅವುಗಳ ಪ್ರಯೋಜನಗಳು, ಮತ್ತು ಕನ್ನಡ ಭಾಷೆಯ ವಿಶೇಷ ಅಗತ್ಯತೆಗಳ ಬಗ್ಗೆ ಸಂಪೂರ್ಣ ವಿವರವಾಗಿ ತಿಳಿಯೋಣ.

How to convert Text - PDF Full guide In Kannada
Text to PDF

How to convert Text – PDF Full guide In Kannada

ಟೆಕ್ಸ್ಟ್‌ಅನ್ನು ಪಿಡಿಎಪ್‌ ( Text to PDF ) ಆಗಿ ಪರಿವರ್ತಿಸುವುದು ಏಕೆ ಎಂಬುದರ ಕುರಿತು ನೊಡೊನ ಬನ್ನಿ?

PDF ಫೈಲ್‌ಗಳು ಈ ಕೆಳಗಿನ ಪ್ರಯೋಜನಗಳನ್ನು ನೀಡುತ್ತವೆ :  

  • ಕ್ರಾಸ್-ಪ್ಲಾಟ್‌ಫಾರ್ಮ್ ಹೊಂದಾಣಿಕೆ : ಎಲ್ಲಾ ಡಿವೈಸ್‌ಗಳು (ಮೊಬೈಲ್, ಲ್ಯಾಪ್‌ಟಾಪ್) ಮತ್ತು OSಗಳಲ್ಲಿ ಒಂದೇ Formating ಕಾಣುತ್ತದೆ. 
  • ಸುರಕ್ಷತೆ : ಪಾಸ್‌ವರ್ಡ್ ಪ್ರೊಟೆಕ್ಷನ್, ಎಡಿಟಿಂಗ್ ನಿರ್ಬಂಧಗಳನ್ನು ಸೇರಿಸಬಹುದು. 
  • ಸ್ಥಳೀಯ ಭಾಷೆಗಳಿಗೆ ಬೆಂಬಲ : ಉದಾ : ಕನ್ನಡ ಫಾಂಟ್‌ಗಳು (ಬರಹ, ಕನ್ನಡ ಕಾಗುಣಿತ, ನುಡಿ ) ಈ Software ಗಳನ್ನು ಬರೆಯಲು ಬಳಸಬಹುದು.

ಟೆಕ್ಸ್ಟ್‌ಅನ್ನು PDF ( Text to PDF )ಆಗಿ ಪರಿವರ್ತಿಸುವ ವಿಧಾನಗಳು.  

1. ಆನ್‌ಲೈನ್ ಟೂಲ್‌ಗಳು (ಯಾವುದೇ ಸಾಫ್ಟ್‌ವೇರ್ ಇಲ್ಲದೆ or without any software)

  • mvvot.com, Smallpdf, ILovePDF: ಈ ಟೂಲ್‌ಗಳು TXT/DOCX ಇನ್ನು ಹಲವು ಫೈಲ್‌ಗಳನ್ನು 2 ಕ್ಲಿಕ್‌ಗಳಲ್ಲಿ PDF ಆಗಿ ಪರಿವರ್ತಿಸುತ್ತವೆ.  
  •  ಪ್ರಯೋಜನ : ವೇಗವಾಗಿ, ಮತ್ತು ಮೊಬೈಲ್-ಫ್ರೆಂಡ್ಲಿ ಆಗಿ ಇರುತ್ತವೆ.  
  •  ಸವಾಲು : ದೊಡ್ಡ ಫೈಲ್‌ಗಳಿಗೆ ಇಂಟರ್ನೆಟ್ ಅಗತ್ಯ ಬೇಕಾಗುತ್ತದೆ.

2. ಮೈಕ್ರೋಸಾಫ್ಟ್ ವರ್ಡ್ (Microsoft Word) ಬಳಸುವುದು.

  • ಟೆಕ್ಸ್ಟ್ ಫೈಲ್ ಅನ್ನು Word (DOCX) ಆಗಿ ತೆಗೆದು ನಂತರ,  
  • File > Save As > PDF ಆಯ್ಕೆಮಾಡಿ ನಂತರ,  
  • ಕನ್ನಡ ಫಾಂಟ್‌ಗಳು ಸರಿಯಾಗಿ ಕಾಣುವುದನ್ನು ಖಚಿತಪಡಿಸಿಕೊಳ್ಳಬೇಕು.

3. Google Docs (ಉಚಿತ).

  • Google Driveಗೆ TXT ಫೈಲ್ ಅಪ್‌ಲೋಡ್ ಮಾಡುವುದು ನಂತರ,  
  • Open with Google Docs ಕ್ಲಿಕ್ ಮಾಡುವುದು ನಂತರ,
  • File > Download > PDF (.pdf) ಆಯ್ಕೆಮಾಡಿ Save ಮಾಡುವುದು.

4. Linux/ಮ್ಯಾಕ್‌OS ಟರ್ಮಿನಲ್ ಬಳಸುವುದು (For Technical Users).

text2pdf input.txt -o output.pdf

or Libre Office ಕಮಾಂಡ್ ಲೈನ್ ಬಳಸುವುದು.

lowriter --convert-to pdf myfile.txt

ಕನ್ನಡ Text ಗೆ ವಿಶೇಷ ಗಮನ ಹರಿಸುವುದು.

Font ಸಮಸ್ಯೆಗಳು : ಕನ್ನಡ Text to PDF ಆಗಿ ಪರಿವರ್ತಿಸುವಾಗ, Unicode Font ಗಳನ್ನು (Noto Sans Kannada, Tunga Nudi Unicode Fonts ) ಬಳಸುವುದು.  

OCR ಸಾಫ್ಟ್‌ವೇರ್ : ಸ್ಕ್ಯಾನ್ ಮಾಡಿದ ಕನ್ನಡ ದಾಖಲೆಗಳಿಗೆ, Adobe Acrobat Pro ಅಥವಾ Nanakshahi OCR ಬಳಸಿ.

ಸಾಮಾನ್ಯವಾಗಿ ಬರುವ ತೊಂದರೆಗಳು & ಪರಿಹಾರಗಳು

ಸಮಸ್ಯೆಪರಿಹಾರ
ಕನ್ನಡ Text ಗೊಂದಲವಾಗಿ ಕಾಣುವುದು.Unicode Font ಬಳಸುವುದು.
PDF ಫೈಲ ಸೈಜ್‌ ಹೆಚ್ಚಾಗಿರುವುದು.PDF Compress ಬಳಸುವುದು.
ಆನಲೈನ tools ಗಳಲ್ಲಿ ಗೌಪ್ಯತೆ ಚಿಂತೆ.Offline Software ಬಳಸುವುದು.

ತೀರ್ಮಾನ  

ಟೆಕ್ಸ್ಟ್‌ಫೈಲ್‌ಗಳನ್ನು PDF ಆಗಿ ಪರಿವರ್ತಿಸುವುದು ಸರಳವಾಗಿರುತ್ತವೆ ಆದರೂ ಸ್ಥಳೀಯ ಭಾಷೆಗಳಿಗ ಹೆಚ್ಚಿನ ಎಚ್ಚರಿಕೆ ಬೇಕು. Google Docs ಅಥವಾ LibreOffice ನಂತಹ ಉಚಿತ ಮಾರ್ಗಗಳು ಹೆಚ್ಚಿನ ಬಳಕೆದಾರರಿಗೆ ಸಾಕಾಗುತ್ತವೆ. PDF ಫೈಲ್‌ಗಳನ್ನು ಶಾಲಾ ಪ್ರಾಜೆಕ್ಟ್‌ಗಳು, ಅಥವಾ ವ್ಯವಹಾರ ಒಪ್ಪಂದಗಳಿಗೆ ಸುರಕ್ಷಿತವಾಗಿ ಬಳಸಲು ಅನುಕೂಲಕರವಾಗಿವೆ.

ಈ ಲೇಖನವು ನಿಮಗೆ ಉಪಯುಕ್ತವಾಗಿದ್ದರೆ ಕಾಮೆಂಟ್‌ ಬಾಕ್ಸ್‌ನಲ್ಲಿ ನಿಮ್ಮಅನಿಸಿಕೆ, ಅಭಿಪ್ರಾಯ, ಅನುಭವಗಳನ್ನು ಹಂಚಿಕೊಳ್ಳಿ.

Leave a Comment

Your email address will not be published. Required fields are marked *

Scroll to Top