IPL 2026 RCB Ban? ಐಪಿಎಲ್ 2026: ‘ಕಪ್’ ಚುಕ್ಕೆ… ಆರ್‌ಸಿಬಿ ಐಪಿಎಲ್‌ನಿಂದ ಬ್ಯಾನ್ ಆಗುತ್ತಾ? ಅಸಲಿಗೆ ಏನಾಯ್ತು?

rcb ban
RCB Ban? Yes or No

ಕಳೆದ ಐಪಿಎಲ್ ಸೀಸನ್ 2025 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ, ಪಂಜಾಬ್ ಕಿಂಗ್ಸ್ ವಿರುದ್ಧ 6 ರನ್‌ಗಳಿಂದ ಭರ್ಜರಿ ಗೆಲುವು ಸಾಧಿಸಿ, ಚೊಚ್ಚಲ ಬಾರಿಗೆ ಐಪಿಎಲ್ ಟ್ರೋಫಿ ಎತ್ತಿ ಹಿಡಿದಿದ್ದು, ಇಡೀ ಕರ್ನಾಟಕವೇ ಸಂಭ್ರಮಪಟ್ಟಿತ್ತು. ಈ ಐತಿಹಾಸಿಕ ಗೆಲುವಿನ ಬೆನ್ನಲ್ಲೇ, ಜೂನ್ 4 ರಂದು ಬೆಂಗಳೂರಿನ ವಿಧಾನಸೌಧದ ಮ್ಯಾಲೆ, ಅದರ ಸಂಗಡ ಚಿನ್ನಸ್ವಾಮಿ ಸ್ಟೇಡಿಯಂ ಮ್ಯಾಲೆ ದೊಡ್ಡ ವಿಜಯೋತ್ಸವ ಏರ್ಪಡಿಸಲಾಗಿತ್ತು. ಆದ್ರ ಇದರ ನಡುವೆ ಆ ವಿಜಯೋತ್ಸವದಾಗೆ ಉಂಟಾದ ಕಾಲ್ತುಳಿತಕ್ಕ ಚುರಂಗ 11 ಮಂದಿ ಜೀವ ಕಳಕೊಂಡ್ರು, ಹಲವರು ಗಾಯಗೊಂಡ್ರು. ಈಗ ಇದನ್ನ ಬಿಸಿಸಿಐ ಗಂಭೀರವಾಗಿ ತಗೊಂಡದ.

ಆರ್‌ಸಿಬಿ ಬ್ಯಾನ್ ಆಗೋ ಮಾತ್ ಯಾಕೆ ಬಂತು?

ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ನ ಹಾಲಿ ಚಾಂಪಿಯನ್ ಆಗಿರೋ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಐಪಿಎಲ್ 2026 ರಿಂದ ಬ್ಯಾನ್ ಆಗ್ತದನೋ ಅನ್ನೋ ಪ್ರಶ್ನೆ ಈಗ ಎಲ್ಲೆಡೆ ಕೆರಿ ಬಂದದ. ಇದಕ್ಕೆ ಮುಖ್ಯ ಕಾರಣ, ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಕೊಟ್ಟಿರೋ ಹೇಳಿಕೆ. ಈ ವರ್ಷ ಭರ್ಜರಿ ಪ್ರದರ್ಶನ ಕೊಟ್ಟು ಕಪ್ ಗೆದ್ದ ಆರ್‌ಸಿಬಿ ತಂಡದ ಗೆಲುವಿನ ಸಂಭ್ರಮ ದುರಂತಕ್ಕ ತಿರುಗಿದ್ದು, ಐಪಿಎಲ್​ಗೆ ಇದೊಂದು ಕಪ್ಪು ಚುಕ್ಕಿ ಆಗಿ ಪರಿಣಮಿಸಿದ ಅಂತಾ ಬಿಸಿಸಿಐ ಗಂಭೀರವಾಗಿ ತಗೊಂಡದ.

ಆರ್‌ಸಿಬಿ ವಿಜಯೋತ್ಸವದಾಗ ಬೆಂಗಳೂರಿನಾಗ ನಡೆದ ಕಾಲ್ತುಳಿತದಾಗ 11 ಮಂದಿ ಸತ್ತಿದ್ದು, ಈ ಬಗ್ಗೆ ಮಾತಾಡಿದ ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ, “ಇಂತ ಘಟನೆಗಳು ಆದಾಗ ಭಾರತೀಯ ಕ್ರಿಕೆಟ್ ಮಂಡಳಿ ಸುಮ್ಮನೆ ಕೂತ್ಕೊಳ್ಳಲ್ಲ” ಅಂತಾ ಸ್ಪಷ್ಟ ಸಂದೇಶ ಕಳಿಸಿದ್ರು.

ಭವಿಷ್ಯದಾಗ ಐಪಿಎಲ್ ಚಾಂಪಿಯನ್‌ಶಿಪ್ ನಂತರದ ಸಂಭ್ರಮಾಚರಣೆಗಳನ್ನ ನಿಯಂತ್ರಿಸಾಕ ಮಂಡಳಿ ಕಠಿಣ ಕ್ರಮಗಳನ್ನು ತಗೊಳ್ಳಾಕ ಪ್ಲಾನ್ ಮಾಡ್ಯಾದ. ಈ ಸಂಭ್ರಮಾಚರಣೆ ಆರ್‌ಸಿಬಿ ಖಾಸಗಿಯಾಗಿ ಏರ್ಪಡಿಸಿದ್ರೂ, ಇಂತ ದುರಂತಗಳು ಇನ್ನೊಮ್ಮೆ ಆಗಬಾರ್ದು ಅಂತಾ ಬಿಸಿಸಿಐ ಕಟಿಬದ್ಧವಾಗಿದೆ.

“ಆರ್‌ಸಿಬಿ ವಿಜಯೋತ್ಸವದಾಗ ನಡೆದ ಘಟನೆ ಬಗ್ಗೆ ಬಿಸಿಸಿಐ ಏನಾದ್ರೂ ಮಾಡ್ಲೇಬೇಕಾಗತದ. ನಾವು ಸುಮ್ಮನೆ ಕೂತ್ಕೊಳ್ಳಾಕ ಆಗಲ್ಲ” ಅಂತಾ ಸೈಕಿಯಾ ಹೇಳಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ತಗೋತೇವಿ ಅನ್ನೋ ಸೂಚನೆ ಕೊಟ್ಟದ.

ದೇವಜಿತ್ ಸೈಕಿಯಾ ಅವರ ಈ ಹೇಳಿಕೆ ಆರ್‌ಸಿಬಿ ತಂಡ ಐಪಿಎಲ್ 2026 ರಿಂದ ಬ್ಯಾನ್ ಆಗ್ತದನೋ ಅನ್ನೋ ಪ್ರಶ್ನೆ ಹುಟ್ಟುಹಾಕದ. ಯಾಕಂದ್ರ ಆರ್‌ಸಿಬಿಯ ವಿಜಯೋತ್ಸವದ ದುರಂತವನ್ನ ಬಿಸಿಸಿಐ ಗಂಭೀರವಾಗಿ ತಗೊಂಡದ. ಇದರ ಜೊತೆಗೆ ಇದು ಐಪಿಎಲ್ ಪಾಲಿಗೆ ದೊಡ್ಡ ಕಪ್ಪು ಚುಕ್ಕಿ ಆಗಿಬಿಟ್ಟದ.

ಹಿಂದೆ ಐಪಿಎಲ್ ಟ್ರೋಫಿ ಗೆದ್ದಾಗ ಕೋಲ್ಕತ್ತಾ ನೈಟ್ ರೈಡರ್ಸ್ ಫ್ರಾಂಚೈಸಿ, ಗುಜರಾತ್ ಟೈಟಾನ್ಸ್ ಫ್ರಾಂಚೈಸಿ ಎಲ್ಲ ವಿಜಯೋತ್ಸವ ಮಾಡಿದ್ವು. ಅವಾಗ ಯಾವ ಅಹಿತಕರ ಘಟನೆನೂ ಆಗಿರ್ಲಿಲ್ಲ. ಆದ್ರ ಆರ್‌ಸಿಬಿ ಫ್ರಾಂಚೈಸಿಯ ಗೆಲುವಿನ ಸಂಭ್ರಮ 11 ಮಂದಿ ಜೀವ ತಗೊಂಡದ. ಹಲವರು ಗಾಯಗೊಂಡಾರ.

ನಿಜಕ್ಕೂ ಆರ್‌ಸಿಬಿ ಬ್ಯಾನ್ ಆಗುತ್ತಾ?

ಇಂತ ಘಟನೆಗಳು ಐಪಿಎಲ್‌ನ ಬ್ರ್ಯಾಂಡ್ ವ್ಯಾಲ್ಯೂ ಮ್ಯಾಲೆ ಪರಿಣಾಮ ಬೀರ್ತಾವ. ಹೀಗಾಗಿಯೇ ಈಗ ಬಿಸಿಸಿಐ ಮುಂದೆ ಏನು ಮಾಡ್ಬೇಕು ಅಂತಾ ಯೋಚನೆ ಮಾಡ್ತದ. ಒಂದು ವೇಳೆ ಈ ದುರ್ಘಟನೆಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯೇ ನೇರ ಕಾರಣ ಅನ್ನೋದು ಗೊತ್ತಾದ್ರ, ಆರ್‌ಸಿಬಿ ತಂಡಕ್ಕ ಒಂದು ವರ್ಷದ ನಿಷೇಧ ಹೇರಬಹುದು.

Read More Blogs….. Click here

ಬಿಸಿಸಿಐ ಮುಂದಿನ ನಡೆ ಏನು?

ಆರ್‌ಸಿಬಿ ವಿಜಯೋತ್ಸವದ ಕಾಲ್ತುಳಿತ ದುರಂತದ ತನಿಖೆಗಾಗಿ ಹೈಕೋರ್ಟ್​ನ ನಿವೃತ್ತ ನ್ಯಾಯಾಧೀಶರಾದ ಮೈಕಲ್ ಕುನ್ಹಾ ಅವರ ನೇತೃತ್ವದಾಗ ‘ಒನ್ ಮ್ಯಾನ್ ಕಮಿಷನ್’ ರಚನೆ ಮಾಡ್ಯಾದ ಅಂತಾ ಸಿಎಂ ಸಿದ್ಧರಾಮಯ್ಯ ಹೇಳಿದ್ರು. ಇದರ ಜೊತೆಗೆ ಆರ್‌ಸಿಬಿ ಮ್ಯಾಲೆ, ಇವೆಂಟ್ ಮ್ಯಾನೇಜ್ಮೆಂಟ್ ಸಂಸ್ಥೆ ಡಿಎನ್​ಎ, ಕೆಎಸ್‌ಸಿಎ ಅನ್ನ ಯಾರೆಲ್ಲ ಪ್ರತಿನಿಧಿಸ್ತಾರೋ ಅವ್ರನ್ನ ಅರೆಸ್ಟ್ ಮಾಡಾಕ ಸರ್ಕಾರ ಸೂಚನೆ ಕೊಟ್ಟದ.

ಅದರಂತೆ ಈಗಾಗ್ಲೇ ಆರ್‌ಸಿಬಿ, ಡಿಎನ್​ಎ, ಕೆಎಸ್‌ಸಿಎ ವಿರುದ್ಧ ಕಬ್ಬನ್ ಪಾರ್ಕ್ ಠಾಣೆಯಾಗ ಎಫ್‌ಐಆರ್ ದಾಖಲಾಗದ. ಇದರ ತನಿಖೆಯ ಜವಾಬ್ದಾರಿಯನ್ನ ಸಿಐಡಿಗೆ ಕೊಟ್ಟಾರ. ಈ ತನಿಖಾ ವರದಿ ಬಂದ ಮ್ಯಾಲೆ ಭಾರತೀಯ ಕ್ರಿಕೆಟ್ ಮಂಡಳಿ ಸಭೆ ನಡೆಸೋ ಸಾಧ್ಯತೆ ಇರ್ತದ.

ಒಂದು ವೇಳೆ ಸಿಐಡಿ ತನಿಖಾ ವರದಿಯಾಗ ಕಾಲ್ತುಳಿತ ದುರಂತಕ್ಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಮ್ಯಾನೇಜ್ಮೆಂಟ್ ನೇರ ಕಾರಣ ಅನ್ನೋದು ಗೊತ್ತಾದ್ರ, ಬಿಸಿಸಿಐ ಕಠಿಣ ಕ್ರಮ ತಗೋಳೋದು ಖಂಡಿತ. ಈ ಕಠಿಣ ಕ್ರಮದಾಗ ಒಂದು ವರ್ಷದವರೆಗೆ ಫ್ರಾಂಚೈಸಿ ಮ್ಯಾಲೆ ನಿಷೇಧ ಹೇರಿದ್ರೂ ಅಚ್ಚರಿಪಡೋ ಹಾಗಿಲ್ಲ.

Leave a Comment

Your email address will not be published. Required fields are marked *

Scroll to Top